
23rd April 2025
ಬೀದರ. ಏ. 22 :- ಪ್ರಸಕ್ತ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಸಾಧನೆಗೈದ ಇಲ್ಲಿಯ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಮಂಗಳವಾರ ಸನ್ಮಾನಿಸಲಾಯಿತು.
ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಅವರು ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ಹೂಮಾಲೆ ಹಾಕಿ ಸತ್ಕರಿಸಿ, ಪ್ರೋತ್ಸಾಹಿಸಿದರು.
ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಕಾಲೇಜಿನ 19 ವಿದ್ಯಾರ್ಥಿಗಳು ಸಾಧನೆಗೈದು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಳಿಸಿದ್ದಾರೆ ಎಂದು ಅವರು ತಿಳಿಸಿದರು.
ಸಂದೀಪ್ ಮಲ್ಲಿಕಾರ್ಜುನ 756 ನೇ ರ್ಯಾಂಕ್, ಮಾರುತಿ ವಿ. 2,178ನೇ ರ್ಯಾಂಕ್, ನಾಗೇಶಕುಮಾರ ಎಂ. 3,318ನೇ ರ್ಯಾಂಕ್, ಕೃಷ್ಣವೇಣಿ ಎಂ. 5,673ನೇ ರ್ಯಾಂಕ್, ಭಾಗ್ಯವಂತಿ ಜಿ. 7,803ನೇ ರ್ಯಾಂಕ್, ಆರತಿ ಎನ್. 7,907ನೇ ರ್ಯಾಂಕ್, ಭಾಗ್ಯಶ್ರೀ ಜಿ. 9,243ನೇ ರ್ಯಾಂಕ್, ನಂದಿನಿ ಬಿ. 10,357ನೇ ರ್ಯಾಂಕ್, ಪುನೀತ್ 12,513ನೇ ರ್ಯಾಂಕ್, ಅಭಿಷೇಕ ಎ. 13,487ನೇ ರ್ಯಾಂಕ್, ತನೀಶ್ ಸಿ. 41,399 ನೇ ರ್ಯಾಂಕ್ ಗಳಿಸಿದ್ದಾರೆ. ಜೆಇಇ ಅಡ್ವಾನ್ಸ್ಗೆ ಅರ್ಹತೆ ಗಳಿಸಿದ ಇತರ ವಿದ್ಯಾರ್ಥಿಗಳಲ್ಲಿ ಶುಭಾಂಗಿ ಎಸ್., ಸುಮೀತ್ ಜಿ.ಟಿ., ಡ್ಯಾನಿಯಲ್, ಆದಿತ್ಯ ಅಂಬುರೆ, ನಿಶ್ಚಿತಾ, ವಿನಾಯಕ ಸ್ವಾಮಿ, ಕಂಕನ ಮೈತಿ, ಸಾಯಿಕಿರಣ ಸೇರಿದ್ದಾರೆ ಎಂದು ಹೇಳಿದರು.
ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಡಿ. ತಾಂದಳೆ, ಕಾರ್ಯದರ್ಶಿ ಗೋಪಾಲ್ ಡಿ. ತಾಂದಳೆ ಉಪಸ್ಥಿತರಿದ್ದರು. ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧಗಳ ತಡೆಗೆ ಸೂಕ್ತ ಕ್ರಮ ಸಹಾಯವಾಣಿ-೧೯೩೦ ಹಾಗೂ ವೆಬ್ಬಾಟ್ ಉನ್ನತೀಕರಣ
ಏ.24 ರಂದು ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ
ಅಲೆಮಾರಿ ಸಮುದಾಯ ಜನರಿಗೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಲಾಗಿದೆ ಜಾಗೃತಿ ಮೂಡಿಸಿ ಸವಲತ್ತು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು -ಪಲ್ಲವಿ ಜಿ.